ಬ್ರೇಕಿಂಗ್
Ad
GREEN VALLEY INTERNATIONAL SCHOOL
ಬ್ರೇಕಿಂಗ್ರಾಜ್ಯ

ಬರಪೀಡಿತ ಪಟ್ಟಿಗೆ ಮುದ್ದೇಬಿಹಾಳ ಸೇರದಿರುವುದು ರಾಜಕೀಯ ಹಸ್ತಕ್ಷೇಪದಿಂದಲ್ಲ; ಮುಂದಿನ ವಾರಗಳಲ್ಲಿ ಘೋಷಣೆ: ಸಚಿವ ಎಂ.ಬಿ. ಪಾಟೀಲ

ವಿಜಯಪುರ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಅವರು ಮಾಧ್ಯಮಗಳ ಮೂಲಕ ಮಾಡಿರುವ ಆರೋಪಗಳಿಗೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಸ್ಪಷ್ಟನೆ ನೀಡಿದ್ದಾರೆ. ಬರಪೀಡಿತ ತಾಲೂಕುಗಳ ಘೋಷಣೆ ಸರ್ಕಾರದ ಮಾರ್ಗಸೂಚಿ ಹಾಗೂ ಉಪಗ್ರಹ ಆಧಾರಿತ ಮಾಹಿತಿಯ ಮೇಲೆ ನಡೆಯುತ್ತಿದ್ದು, ಇದರಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಮುಂದಿನ ವಾರಗಳಲ್ಲಿ ಘೋಷಣೆ ಆಗುವ ನಿರೀಕ್ಷೆಯಿದೆ ಎಂದಿದ್ದಾರೆ. ಬರ ಅಧ್ಯಯನಕ್ಕೆ ಜಿಲ್ಲಾಡಳಿತದ ತಂಡ ಎರಡು ಬಾರಿ ತೆರಳಿದ್ದರೂ ಶಾಸಕ ನಾಡಗೌಡ ಅವರು ಸ್ಥಳಕ್ಕೆ ಹಾಜರಾಗಲಿಲ್ಲ ಎಂದು ಸಚಿವರು ಆರೋಪಿಸಿದ್ದು, ರೈತರ ಹೆಸರಿನಲ್ಲಿ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

7 ನಿಮಿಷಗಳ ಹಿಂದೆ 1
Ad
KESAPUR MEDICAL

ಇತ್ತೀಚಿನ ಸುದ್ದಿಗಳು

Latest updates
ರಾಜ್ಯ· 3 ದಿನಗಳ ಹಿಂದೆ

ಆಯುರ್ವೇದ ಕ್ಷೇತ್ರದಲ್ಲಿ ಡಾ. ನಾಗರಾಜ್ ಕಾಮತ್ ಅವರ 6 ರು ವಿಶಿಷ್ಟ ದಾಖಲೆಗಳನ್ನು ಸಾಧಿಸಿದ್ದಾರೆ.

ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಅಸೋಸಿಯೇಟ್ ಪ್ರೊಫೆಸರ್ ಡಾ. ನಾಗರಾಜ್ ಕಾಮತ್ ಅವರು ಆಯುರ್ವೇದ ಶಿಕ್ಷಣ, ಸಂಶೋಧನೆ ಮತ್ತು ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರ ‘ಸುಚಿತ್ರ ಕ್ರಿಯಾಶರೀರ’ ಕೃತಿಗೆ ವಿಶ್ವದ ಮೊದಲ ಬಣ್ಣದ ಕ್ರಿಯಾಶರೀರ ಅಟ್ಲಸ್ ಎಂಬ ದಾಖಲೆ ಮಾನ್ಯತೆ ದೊರೆತಿದೆ. ಇದಕ್ಕೂ ಮುನ್ನ ಅವರು ರೂಪಿಸಿದ 'ಕ್ರಿಯಾಸ್ಪರ್ಶಮ್’ ಆಯುರ್ವೇದ ಕಲಿಕಾ ಆ್ಯಪ್‌ಗೂ ವಿವಿಧ ವಿಶ್ವ ದಾಖಲೆ ಸಂಸ್ಥೆಗಳಿಂದ ಮಾನ್ಯತೆ ಲಭಿಸಿದೆ. ಅಲ್ಲದೆ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 50 ಸಂಶೋಧನಾ ಮತ್ತು ವಿಮರ್ಶಾ ಲೇಖನಗಳನ್ನು ಪ್ರಕಟಿಸಿರುವ ಸಾಧನೆಯೂ ಅವರ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಯುರ್ವೇದದ ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ಡಿಜಿಟಲ್ ಮತ್ತು ದೃಶ್ಯಾಧಾರಿತ ಶಿಕ್ಷಣ ಮಾಧ್ಯಮಗಳೊಂದಿಗೆ ಸಂಯೋಜಿಸಿ, ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಸುಲಭವಾಗಿ ತಲುಪಿಸುವಲ್ಲಿ ಡಾ. ನಾಗರಾಜ್ ಕಾಮತ್ ಅವರ ಕೊಡುಗೆ ಗಮನಾರ್ಹವಾಗಿದೆ.

ರಾಜ್ಯ· 3 ದಿನಗಳ ಹಿಂದೆ

ಅವೈಜ್ಞಾನಿಕ ಬರ ಸಮೀಕ್ಷೆ ಕೈಬಿಟ್ಟು ವೈಜ್ಞಾನಿಕ ಸಮೀಕ್ಷೆ ಜಾರಿಗೊಳಿಸಿ: ಆಮ್ ಆದ್ಮಿ ಪಾರ್ಟಿ ಆಗ್ರಹ

ವಿಜಯಪುರ ಜಿಲ್ಲೆಯ ಎಲ್ಲಾ 13 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ – ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ವಿಜಯಪುರ: ಮುಂಗಾರು ಮಳೆಯ ಕೊರತೆ ಹಾಗೂ ಅಸಮರ್ಪಕ ಮಳೆಯಿಂದ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ನಷ್ಟ, ನೀರಿನ ಕೊರತೆ ಮತ್ತು ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅವೈಜ್ಞಾನಿಕ ಬರ ಸಮೀಕ್ಷೆಯನ್ನು ಕೈಬಿಟ್ಟು, ಎಲ್ಲಾ ತಾಲೂಕುಗಳಲ್ಲಿ ವೈಜ್ಞಾನಿಕ ಹಾಗೂ ಪಾರದರ್ಶಕ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು ಮತ್ತು ವಿಜಯಪುರ ಜಿಲ್ಲೆಯ ಎಲ್ಲಾ 13 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.

ರಾಜ್ಯ· 5 ದಿನಗಳ ಹಿಂದೆ

“ಮುದ್ದೇಬಿಹಾಳವನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ; ಇಲ್ಲವಾದರೆ ರೈತರ ಶಾಪ ಸರ್ಕಾರಕ್ಕೆ ತಟ್ಟಲಿದೆ” – ಮಹೇಬೂಬ ಹಡಲಗೇರಿ ಎಚ್ಚರಿಕೆ

ಮಳೆ ಕೊರತೆಯಿಂದ ರೈತರು ಕಂಗಾಲು: ಅವೈಜ್ಞಾನಿಕ ಸಮೀಕ್ಷೆ ಮೂಲಕ ತಾಲೂಕನ್ನು ಬರ ಪಟ್ಟಿಯಿಂದ ಕೈಬಿಟ್ಟಿರುವ ಆರೋಪ ಮುದ್ದೇಬಿಹಾಳ ತಾಲೂಕನ್ನು ತಕ್ಷಣ ಬರಪೀಡಿತ ತಾಲೂಕು ಎಂದು ಘೋಷಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಇಲ್ಲವಾದರೆ ರೈತರೊಂದಿಗೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಆಮ್ ಆದ್ಮಿ ಪಾರ್ಟಿಯ ಮುದ್ದೇಬಿಹಾಳ ಮತಕ್ಷೇತ್ರದ ಅಧ್ಯಕ್ಷ ಮಹೇಬೂಬ ಹಡಲಗೇರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ· 6 ದಿನಗಳ ಹಿಂದೆ

ಅಂಜುಮನ್-ಏ-ಇಸ್ಲಾಂ ಕಮಿಟಿಯ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಅಂಜುಮನ್ ಹಿತರಕ್ಷಣಾ ಸಮಿತಿಯಿಂದ ಅಭಿನಂದನೆ

ಅಂಜುಮನ್-ಏ-ಇಸ್ಲಾಂ ಕಮಿಟಿಯ ಚುನಾವಣೆಯಲ್ಲಿ 25 ಸದಸ್ಯರು ಆಯ್ಕೆಯಾದ ಹಿನ್ನೆಲೆಯಲ್ಲಿ, ಸರ್ವ ಸದಸ್ಯರ ಸಮ್ಮತಿಯಲ್ಲಿ ಅಧ್ಯಕ್ಷರಾಗಿ ಅಲ್ಲಾಬಕ್ಷ ದೇಸಾಯಿ (ಲಾರಾ), ಉಪಾಧ್ಯಕ್ಷರಾಗಿ ಇರ್ಫಾನ್ ಕೂಡಗಿ ಹಾಗೂ ಕಾರ್ಯದರ್ಶಿಯಾಗಿ ಸದ್ದಾಂ ಹುಸೇನ್ ನದಾಫ್ ಆಯ್ಕೆಯಾಗಿರುವುದಕ್ಕೆ ಅಂಜುಮನ್ ಹಿತರಕ್ಷಣಾ ಸಮಿತಿ ಅಭಿನಂದನೆ ಸಲ್ಲಿಸಿದೆ. ನೂತನ ಆಡಳಿತ ಮಂಡಳಿ ಅಂಜುಮನ್ ಸಂಸ್ಥೆಯ ಶಿಕ್ಷಣ, ವಾಣಿಜ್ಯ ಹಾಗೂ ಆಸ್ತಿ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಿ ಸಮುದಾಯದ ಬಹುದಿನಗಳ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂಬ ಆಶಯವನ್ನು ಸಮಿತಿ ವ್ಯಕ್ತಪಡಿಸಿದೆ

ರಾಜ್ಯ· 6 ದಿನಗಳ ಹಿಂದೆ

ಕರ್ನಾಟಕದಲ್ಲಿ ಆಸ್ತಿ ನೋಂದಣಿಗೆ ಹೊಸ ವ್ಯವಸ್ಥೆ: ಸಬ್-ರೆಜಿಸ್ಟ್ರಾರ್ ಕಚೇರಿಗೆ ಅಲೆದಾಟಕ್ಕೆ ಬ್ರೇಕ್! ಕಾವೇರಿ 2.0 ಮೂಲಕ ಆನ್‌ಲೈನ್‌ನಲ್ಲೇ ಇ-ನೋಂದಣಿ

ಕರ್ನಾಟಕದಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳ ಮತ್ತು ಡಿಜಿಟಲ್‌ಗೊಳಿಸುವ ನಿಟ್ಟಿನಲ್ಲಿ ಕಾವೇರಿ 2.0 ಪೋರ್ಟಲ್‌ನಲ್ಲಿ ಹಲವು ಆನ್‌ಲೈನ್ ಸೇವೆಗಳನ್ನು ಒದಗಿಸಲಾಗಿದೆ. ಆಸ್ತಿ ವಿವರಗಳ ಪರಿಶೀಲನೆ, ದಾಖಲೆ ಸಿದ್ಧತೆ, ಶುಲ್ಕ ಪಾವತಿ, ಆಧಾರ್ ಆಧಾರಿತ e-KYC ಹಾಗೂ ಡಿಜಿಟಲ್ ಪ್ರಕ್ರಿಯೆಗಳ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸುವ ಉದ್ದೇಶ ಇದಾಗಿದೆ. ಇದರಿಂದ ನಾಗರಿಕರು ಸಬ್-ರೆಜಿಸ್ಟ್ರಾರ್ ಕಚೇರಿಗೆ ಅನಗತ್ಯವಾಗಿ ಹಲವು ಬಾರಿ ಭೇಟಿ ನೀಡಬೇಕಾದ ಪರಿಸ್ಥಿತಿ ಕಡಿಮೆಯಾಗಲಿದೆ.

ರಾಜ್ಯ· 7 ದಿನಗಳ ಹಿಂದೆ

ಇತ್ಯರ್ಥವಾಗದ ಅಂಜುಮನ್ ಪ್ರಕರಣದ ನಡುವೆ ಸಮಿತಿ ರಚನೆಗೆ ಶಾಸಕ ನಾಡಗೌಡರ ಹಸ್ತಕ್ಷೇಪದ ನೇರ ಆರೋಪ: ಮಹೇಬೂಬ ಮುಲ್ಲಾ ಟಾಪ್ ಇನ್ ಟೌನ್

ಮುದ್ದೇಬಿಹಾಳದ ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿ ರಚನೆ ವಿಚಾರದಲ್ಲಿ ಶಾಸಕ ನಾಡಗೌಡರು ವಕ್ಫ್ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ ಎಂಬ ನೇರ ಆರೋಪ ಕೇಳಿಬಂದಿದೆ. ಸಂಸ್ಥೆಗೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಸಂದರ್ಭದಲ್ಲಿ ಸೂಕ್ತ ಮಾಹಿತಿ ಸಂಗ್ರಹಿಸದೆ ಆಡಳಿತ ಮಂಡಳಿ ರಚನೆಗೆ ಮುಂದಾಗಿರುವುದು ಖಂಡನೀಯ ಎಂದು ಅಂಜುಮನ್ ಹಿತರಕ್ಷಣಾ ಸಮಿತಿಯ ಮುಖಂಡ ಮಹೇಬೂಬ ಮುಲ್ಲಾ ಟಾಪ್ ಇನ್ ಟೌನ್ ಆರೋಪಿಸಿದ್ದಾರೆ.

ರಾಜ್ಯ· 8 ದಿನಗಳ ಹಿಂದೆ

ಬಸ್‌ಗಾಗಿ ವಿದ್ಯಾರ್ಥಿಗಳ ಪರದಾಟ: ಹೂಳೆ ಮಸೂತಿ ಗ್ರಾಮದಲ್ಲಿ ಗ್ರಾಮಸ್ಥರು, ಪಾಲಕರು ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ –ಸೇತುವೆ ನಿರ್ಮಾಣಕ್ಕೂ ಆಗ್ರಹ

ಮುದ್ದೇಬಿಹಾಳ ತಾಲೂಕಿನ ಬಳಬಟ್ಟಿ ಹಾಗೂ ಮಸೂತಿ ಗ್ರಾಮದ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿದಿನ ಬಸ್‌ಗಳು ನಿಗದಿತ ಸಮಯಕ್ಕೆ ಬಾರದ ಕಾರಣ ಶಾಲೆಗೆ ಸಮಯಕ್ಕೆ ತೆರಳಲು ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು, ಪಾಲಕರು ಹಾಗೂ ವಿದ್ಯಾರ್ಥಿಗಳು ಮಸೂತಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು. ಸುಮಾರು 7–8 ಬಸ್‌ಗಳನ್ನು ಮೂರು ಗಂಟೆಗಳ ಕಾಲ ತಡೆದು ಸಾರಿಗೆ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದ ಪ್ರತಿಭಟನಾಕಾರರು, ವಿದ್ಯಾರ್ಥಿಗಳಿಗಾಗಿ ಸಮಯಕ್ಕೆ ಸರಿಯಾಗಿ ಬಸ್ ಸಂಚಾರ ಕಲ್ಪಿಸುವುದು ಹಾಗೂ ಬಹುದಿನಗಳ ಬೇಡಿಕೆಯಾಗಿರುವ ಬ್ರಿಜ್ ಸೇತುವೆ ನಿರ್ಮಾಣಕ್ಕೆ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿದರು.

ರಾಜ್ಯ· 9 ದಿನಗಳ ಹಿಂದೆ

1.52 ಲಕ್ಷ ‘ಸ್ಥಳಾಂತರಿತ’, 59 ಸಾವಿರಕ್ಕೂ ಹೆಚ್ಚು ‘ಗೈರು’ – ವಿಜಯಪುರ ನಗರ ಕ್ಷೇತ್ರವೊಂದರಲ್ಲೇ 79,737 ಮತದಾರರು ಹೊರಗುಳಿದಿರುವುದಕ್ಕೆ ಆಕ್ಷೇಪ

ವಿಜಯಪುರ ಜಿಲ್ಲೆಯಲ್ಲಿ SIR ಪರಿಷ್ಕರಣೆಯ ವೇಳೆ ಸುಮಾರು 2.97 ಲಕ್ಷ ಮತದಾರರು ಕರಡು ಪಟ್ಟಿಯಿಂದ ಹೊರಗುಳಿದಿರುವುದು ಆತಂಕಕ್ಕೆ ಕಾರಣವಾಗಿದೆ. ಇವರಲ್ಲಿ 1.52 ಲಕ್ಷಕ್ಕೂ ಹೆಚ್ಚು ಮಂದಿಯನ್ನು ‘ಸ್ಥಳಾಂತರಿತ’, 59 ಸಾವಿರಕ್ಕೂ ಹೆಚ್ಚು ಮಂದಿಯನ್ನು ‘ಗೈರು’ ಹಾಗೂ 30 ಸಾವಿರಕ್ಕೂ ಹೆಚ್ಚು ಮಂದಿಯನ್ನು ‘ಡುಪ್ಲಿಕೇಟ್’ ಎಂದು ಗುರುತಿಸಲಾಗಿದೆ. ವಿಜಯಪುರ ನಗರ ಕ್ಷೇತ್ರವೊಂದರಲ್ಲೇ 79,737 ಮತದಾರರು ಹೊರಗುಳಿದಿದ್ದಾರೆ. ಅರ್ಹ ಮತದಾರರ ಹೆಸರುಗಳನ್ನು ಸಮರ್ಪಕ ಪರಿಶೀಲನೆ ಮತ್ತು ಅವಕಾಶವಿಲ್ಲದೆ ಕೈಬಿಡಬಾರದು, ‘Absent’, ‘Shifted’ ಹಾಗೂ ‘Logical Discrepancy’ ಪ್ರಕರಣಗಳಿಗೆ ಸ್ಪಷ್ಟತೆ ನೀಡಬೇಕು ಮತ್ತು ಕ್ಷೇತ್ರವಾರು ಅಂಕಿಅಂಶಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ಮತ ಕಾವಲು ಸಮಿತಿ ಆಗ್ರಹಿಸಿದೆ.

ರಾಜ್ಯ· 9 ದಿನಗಳ ಹಿಂದೆ

ಆಡಳಿತ ಸೌಧವೇ ಅವ್ಯವಸ್ಥೆಯ ತಾಣವಾದರೆ ತಾಲ್ಲೂಕಿನ ಅಭಿವೃದ್ಧಿ ಹೇಗೆ? — ಸಾರ್ವಜನಿಕರ ಪ್ರಶ್ನೆ

ಮುದ್ದೇಬಿಹಾಳ ಕೇಂದ್ರ ಪ್ರದೇಶದಲ್ಲಿರುವ ತಾಲ್ಲೂಕು ಆಡಳಿತ ಸೌಧದಲ್ಲಿ ಸ್ವಚ್ಛತೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಕಂಡುಬರುತ್ತಿರುವ ಬಗ್ಗೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿದೆ. ಶೌಚಾಲಯಗಳ ಸ್ವಚ್ಛತೆ ಮತ್ತು ದುರಸ್ತಿ ಕೊರತೆ, ಸಮರ್ಪಕ ನೀರಿನ ವ್ಯವಸ್ಥೆ ಇಲ್ಲದಿರುವುದು, ಸಾರ್ವಜನಿಕರು ಕುಳಿತುಕೊಳ್ಳಲು ಸೂಕ್ತ ಬೇಂಚುಗಳ ಕೊರತೆ ಸೇರಿದಂತೆ ಹಲವು ಅವ್ಯವಸ್ಥೆಗಳು ಕಂಡುಬರುತ್ತಿವೆ. ಈ ಕುರಿತು ಸಾಹಿಲ್ ತಾಳಿಕೋಟಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡು ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದಿದ್ದಾರೆ.

ಇನ್ನಷ್ಟು

More stories
ರಾಜ್ಯ
ಪ್ರವಾದಿ ಮುಹಮ್ಮದ್ ﷺ ಅವರ ಜೀವನ ಸಂದೇಶ: ಶಿಕ್ಷಣ, ನ್ಯಾಯ, ಮಾನವೀಯತೆ ಮತ್ತು ಆದರ್ಶ ಸಮಾಜ ನಿರ್ಮಾಣಕ್ಕೆ ದಾರಿದೀಪ
11 ದಿನಗಳ ಹಿಂದೆ
ರಾಜ್ಯ
ಅಂಜುಮನ್ ಏ ಇಸ್ಲಾಂ ಕಮಿಟಿಯ ಮೂಲ ಉದ್ದೇಶ ಮಾನವ ಹಕ್ಕುಗಳ ರಕ್ಷಣೆ ಮತ್ತು ಶೈಕ್ಷಣಿಕ ಪ್ರಗತಿ: ಮಹೇಬೂಬ ಮುಲ್ಲಾ
13 ದಿನಗಳ ಹಿಂದೆ
ರಾಜ್ಯ
15,000 ಶಿಕ್ಷಕರ ನೇಮಕಾತಿಯಲ್ಲಿ ಉರ್ದು ಮಾಧ್ಯಮಕ್ಕೆ ಅನ್ಯಾಯ ಆರೋಪ: ನಿಯಮ ಮರುಪರಿಶೀಲನೆಗೆ ಆಗ್ರಹ
14 ದಿನಗಳ ಹಿಂದೆ
ರಾಜ್ಯ
ಮುದ್ದೇಬಿಹಾಳ ಅಂಜುಮನ್ ಇಸ್ಲಾಂ ಕಮಿಟಿ ಚುನಾವಣೆಯಲ್ಲಿ ಮತದಾರರ ತೀರ್ಪು ಸ್ವೀಕರಿಸಿದ ಅಂಜುಮನ್ ಹಿತರಕ್ಷಣಾ ಬಣದ ಅಭ್ಯರ್ಥಿಗಳು
15 ದಿನಗಳ ಹಿಂದೆ
ರಾಜ್ಯ
ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜಿನ DPRಗೆ ಮಂಜೂರಾತಿ: ನೋಂದಣಿ ಪ್ರಕ್ರಿಯೆಯೂ ಪೂರ್ಣ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪ್ರವೇಶ ಪ್ರಕ್ರಿಯೆ ಆರಂಭಿಸಲು ಹೋರಾಟ ಸಮಿತಿ ಆಗ್ರಹ
18 ದಿನಗಳ ಹಿಂದೆ
ರಾಜ್ಯ
ಮುದ್ದೇಬಿಹಾಳ ಅಂಜುಮನ್ ಏ ಇಸ್ಲಾಂ ಕಮಿಟಿ ಚುನಾವಣೆ: ಅಭಿವೃದ್ಧಿಯ ಹಸ್ತಗಳಿಗೆ ಬಲಪಡಿಸಿ
24 ದಿನಗಳ ಹಿಂದೆ