ಸೆ.27ರಂದು ಮುದ್ದೇಬಿಹಾಳ, ಕೋಳೂರು, ಹುಲ್ಲೂರು ವಿದ್ಯುತ್ ಉಪಕೇಂದ್ರಗಳಲ್ಲಿ ನಿರ್ವಹಣೆ: ಬೆಳಗ್ಗೆ 9ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯ
ಮುದ್ದೇಬಿಹಾಳ ತಾಲೂಕಿನ ಮುದ್ದೇಬಿಹಾಳ, ಕೋಳೂರು ಹಾಗೂ ಹುಲ್ಲೂರು (ಜಟ್ಟದಿ) 110/33/11 ಕೆ.ವಿ. ವಿದ್ಯುತ್ ಉಪಕೇಂದ್ರಗಳಲ್ಲಿ ಸೆ.27ರಂದು 2ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ವಿವಿಧ 11 ಕೆ.ವಿ. ಫೀಡರ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ವ
ವರದಿ:ವಾಜೀದ ನಾಗರಾಳ
26 ದಿನಗಳ ಹಿಂದೆ · 66 views

Ad

ಮುದ್ದೇಬಿಹಾಳ:ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ 110/33/11 ಕೆ.ವಿ. ವಿದ್ಯುತ್ ಉಪಕೇಂದ್ರಗಳಾದ ಮುದ್ದೇಬಿಹಾಳ, ಕೋಳೂರು ಹಾಗೂ ಹುಲ್ಲೂರು (ಜಟ್ಟಗಿ) ಕೇಂದ್ರಗಳಲ್ಲಿ 2ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 27, 2026ರಂದು ಬೆಳಗ್ಗೆ 9.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದೆ.
ನಿರ್ವಹಣಾ ಕಾಮಗಾರಿಯ ಕಾರಣದಿಂದ ಈ ಉಪಕೇಂದ್ರಗಳಿಂದ ಹೊರಹೋಗುವ 110 ಕೆ.ವಿ. ಕೆ.ಎನ್. ಸೋಲಾರ್, 110 ಕೆ.ವಿ. ಬಾಲಾಜಿ ಶುಗರ್ಸ್ ಹಾಗೂ 33/11 ಕೆ.ವಿ. ಢವಳಗಿ, ತಂಗಡಗಿ ಮತ್ತು ನಾಲತವಾಡ ವಿದ್ಯುತ್ ಉಪಕೇಂದ್ರಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಇದರ ಪರಿಣಾಮವಾಗಿ ಮೇಲ್ಕಂಡ ವಿದ್ಯುತ್ ಉಪಕೇಂದ್ರಗಳಿಂದ ಹೊರಹೋಗುವ ವಿವಿಧ 11 ಕೆ.ವಿ. ಫೀಡರ್‌ಗಳ ವಿದ್ಯುತ್ ಪೂರೈಕೆಯಲ್ಲಿಯೂ ಅಡಚಣೆ ಉಂಟಾಗಲಿದೆ ಎಂದು ತಿಳಿಸಲಾಗಿದೆ.
ವಿದ್ಯುತ್ ವ್ಯವಸ್ಥೆಯ ನಿರ್ವಹಣೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಕೈಗೊಳ್ಳಲಾಗುತ್ತಿರುವ ಈ ಕಾಮಗಾರಿಗೆ ಸಾರ್ವಜನಿಕರು ಸಹಕರಿಸುವಂತೆ ಸಂಬಂಧಿಸಿದ ವಿದ್ಯುತ್ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
ನಮಸ್ತೆ ಕರ್ನಾಟಕ ವೆಬ್ ನ್ಯೂಸ್ ಜನರ ಧ್ವನಿ – ಜನರ ಪರ ಸುದ್ದಿ
Ad

ಕಾಮೆಂಟ್‌ಗಳು (0)
ಕಾಮೆಂಟ್ ಮಾಡಲು ಲಾಗಿನ್ ಮಾಡಿ.
ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ!

